ಅನುಶೀಲನ ಸಮಿತಿ (ಬಂಕಿಮ ಚಂದ್ರ ಚಟರ್ಜಿಯವರ ತತ್ವಗಳನ್ನು ಪಾಲಿಸುವುದು) ೨೦ನೇ ಶತಮಾನದ ಆರಂಭದಲ್ಲಿ ಬಂಗಾಳದಲ್ಲಿ ಕಾರ್ಯನಿರತವಾಗಿದ್ದ ಮುಖ್ಯ ಗುಪ್ತ ಕ್ರಾಂತಿಕಾರಿ ಸಂಘಟನೆ. ಇದರ ಶಾಖೆಯಾದ ಜುಗಾಂತರ್ ಸಂಘಟನೆಯಂತೆ ನಗರದ ಹೊರವಲಯದಲ್ಲಿ ವ್ಯಾಯಾಮ ಶಾಲೆಯಂತೆ ಭೂಗತವಾಗಿ ಹಬ್ಬಿಕೊಂಡಿತ್ತು. ಇದು ಬ್ರಿಟಿಷ್ ಸಾಮ್ರಾಜ್ಯದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಸಶಸ್ತ್ರ ಕ್ರಾಂತಿಯ ಉದ್ದೇಶ ಹೊಂದಿತ್ತು. ಕಲ್ಕತ್ತಾ ಮತ್ತು ನಂತರ ಢಾಕಾ ನಗರಗಳಲ್ಲಿ ಈ ಸಂಘಟನೆಯು ಬಲಿಷ್ಠವಾಗಿ ನಂತರ ಹಳ್ಳಿಗಳಲ್ಲಿ ಮತ್ತು ಭಾರತದ ಇತರೆಡೆಗೆ ವ್ಯಾಪಿಸಿತು.ಇದರಲ್ಲಿ ಅನೇಕ ಬದಲಾವಣೆ ಗಳು ಉಂಟಾದವು. == ಪ್ರಖ್ಯಾತ ಕ್ರಾಂತಿಕಾರಿಗಳು == ಪ್ರಮಾಥ ನಾಥ ಮಿತ್ರ (೧೮೫೩-೧೯೧೦) ಅರವಿಂದ ಘೋಷ್ (೧೮೭೨-೧೯೫೦) ಚಿತ್ತರಂಜನ್ ದಾಸ್ (೧೮೭೦-೧೯೨೫)